ಭೀಕರ ಅಪಘಾತ : ಸ್ಕೂಟಿ ಸವಾರ ಸಾವು
Wednesday, August 10, 2022
ದ್ವಿಚಕ್ರ ವಾಹನ ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹ ಸವಾರ ಪಾರಾದ ಘಟನೆ ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಸೇತುವೆಯಲ್ಲಿ ನಡೆದಿದೆ.
ಮಲ್ಲಾರು ನಿವಾಸಿ ಅಲ್ಪಾಝ್ ಮೃತ ಸವಾರ. ಕಾಪುವಿನಿಂದ ಉಡುಪಿ ಸಿಟಿ ಕಡೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಉದ್ಯಾವರ ಸೇತುವೆಯಲ್ಲಿ ಭೀಕರ ಅಪಘಾತವಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಹೆದ್ದಾರಿಗೆ ಬಿದ್ದಿದ್ದು, ಟ್ಯಾಂಕರಿನ ಚಕ್ರವು ಸವಾರನ ತಲೆಯ ಮೇಲೆ ಹರಿದಿದೆ. ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತವಾದ ತಕ್ಷಣ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.