
UDUPI : ಮಹಿಳೆಗೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣ : ಆರೋಪಿ ಬಂಧನ
Thursday, August 11, 2022
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರ್ಗಿಯಲ್ಲಿ, ಶಾಲಾ ಬಸ್ಸಿನಲ್ಲಿ ಬರುವ ತನ್ನ ಮಗನನ್ನು ಕರೆದುಕೊಂಡು ಹೋಗಲು ರಸ್ತೆಯ ಬದಿಯಲ್ಲಿ ನಿಂತಿದ್ದ ಮಹಿಳೆ ದೇವಕಿ ಪೂಜಾರಿ ಅವರಿಗೆ ಹಲ್ಲೆ ಮಾಡಿ ಚಿನ್ನದ ಸರ ಎಗರಿಸಿದ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ತ್ರಾಸಿ ಹೊಸಾಡು ನಿವಾಸಿ ಪ್ರವೀಣ್ (24) ಎಂದು ಬಂಧಿತ ವ್ಯಕ್ತಿ.
ಅಗಸ್ಟ್ 5 ರಂದು ಸಂಜೆ, ಕೊರ್ಗಿ ಕ್ರಾಸ್ ಬಳಿಯಲ್ಲಿ ಶಾಲೆಯಿಂದ ಶಾಲಾ ಬಸ್ಸಿನಲ್ಲಿ ಬರುವ ತನ್ನ ಮಗನನ್ನು ಕರೆದುಕೊಂಡು ಹೋಗಲು ಬಂದು ನಿಂತಿದ್ದ ದೇವಕಿ ಪೂಜಾರ್ತಿ (32) ಎಂಬವರ ತಲೆಗೆ ಕಬ್ಬಿಣದ ರಾಡ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿ, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಅಂದಾಜು 2 ಪವನ್, ಕೈಯಲ್ಲಿದ್ದ ಬಳೆ ಅಂದಾಜು ತೂಕ 2 ½ ಪವನ್ ಮತ್ತು ಉಂಗುರ ಅಂದಾಜು ಮೌಲ್ಯ ½ ಪವನ್ ಒಟ್ಟು ರೂಪಾಯಿ 1,60,000/- ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿಕೊಂಡು ಮೋಟಾರ್ ಸೈಕಲ್‌ನಲ್ಲಿ ಹೋಗಿದ್ದು ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತನಿಂದ ಸುಲಿಗೆ ಮಾಡಿರುವ ಚಿನ್ನದ ಉಂಗುರ ಮತ್ತು ಗುಜ್ಜಾಡಿ ಸೊಸೈಟಿಯಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡಿರುವ ನಗದು ಹಣ ಒಟ್ಟು ರೂ. 41,000/- ವಶಪಡಿಸಿಕೊಳ್ಳಲಾಗಿದೆ.