UDUPI : ಮನೆಯವರು ತೀರ್ಥ ಯಾತ್ರೆಗೆ ಹೋದಾಗ ಕಳ್ಳತನ : ಆರೋಪಿ ಬಂಧನ
Thursday, August 11, 2022
ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಹಿಂಬಾಗಿಲು ಒಡೆದು ಚಿನ್ನಾಭರಣ ಹಾಗೂ ನಗದು ಕಳವುಗೈದ ಖದೀಮನನ್ನು ಉಡುಪಿಯ ಕುಂದಾಪುರ ನಗರ ಠಾಣೆ ಪೊಲೀಸರು ಗೋಪಾಡಿಯಲ್ಲಿ ಬಂಧಿಸಿದ್ದಾರೆ. ಕುಂಭಾಶಿ ವಿನಾಯಕ ನಗರದ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ.
ಈತನಿಂದ 8 ಗ್ರಾಂನ ಚಿನ್ನದ ಬ್ರಾಸ್ಲೆಟ್, 12 ಗ್ರಾಂನ ಪೆಂಡೆಂಟ್ ಸಹಿತ ಚೈನ್, 4 ಗ್ರಾಂ, 3 ಗ್ರಾಂ ತೂಕದ ಚಿನ್ನದ ಉಂಗುರ, 1,610 ರೂ. ನಗದು ಪೊಲೀಸರು ವಶಪಡಿಕೊಂಡಿದ್ದಾರೆ. ಕುಂಭಾಶಿಯ ವಿನಾಯಕ ನಗರದ ಮಂಜುನಾಥ ಜೋಗಿ ಜು. 29 ರಂದು ಕುಟುಂಬ ಸಮೇತ ಫಂಡರಾಪುರ ಮತ್ತು ಶಿರ್ಡಿ ದೇವಸ್ಥಾನಕ್ಕೆ ತೀರ್ಥಯಾತ್ರೆ ತೆರಳಿದ್ದರು. ಆ.5 ರಂದು ಮನೆಗೆ ಮರಳಿದಾಗ ಕಳ್ಳತನವಾಗಿತ್ತು. ಮನೆಯ ಹಿಂಬದಿಯ ಬಾಗಿಲನ್ನು ಒಡೆದು ಕಪಾಟಿನಲ್ಲಿದ್ದ 1.20 ಲಕ್ಷ ರೂ. ಮೌಲ್ಯದ ಒಟ್ಟು 27 ಗ್ರಾಂ ಚಿನ್ನಾಭರಣಗಳು ಮತ್ತು 13,500 ರೂ. ನಗದನ್ನು ಕಳವು ಮಾಡಲಾಗಿತ್ತು.