UDUPI : ಬೋಟ್‌ನಿಂದ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರ ನಾಪತ್ತೆ
Thursday, August 11, 2022
ಮೀನುಗಾರಿಕೆ ಬೋಟ್‌ನಿಂದ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾಗಿರುವ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ.
ತಮಿಳುನಾಡು ಮೂಲದ ಗಣೇಶನ್ (51) ಎಂದು ನಾಪತ್ತೆಯಾದ ವ್ಯಕ್ತಿ. ಕಾಸರಗೋಡಿನ ರಾಯಲ್ ಫಿಶರ್ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಮೀನುಗಾರರೆಲ್ಲ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ದಕ್ಕೆಯಲ್ಲಿ ತಯಾರಿ ನಡೆಸುತ್ತಿರುವಾಗ, ಗಣೇಶನ್ ಬೋಟಿನ ಹಿಂಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋಗಿದ್ದರು. ಆಗ ಆಯತಪ್ಪಿ ಆಕಸ್ಮಿಕವಾಗಿ ಬೋಟಿನಿಂದ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರಿಗೆ ಶೋಧಕಾರ್ಯ ನಡೆಯುತ್ತಿದೆ.