-->

UDUPI : ಮಹಿಳೆಯರನ್ನು ಚುಡಾಯಿಸಿದ ವ್ಯಕ್ತಿಗೆ, ಮಹಿಳಾ ಪೊಲೀಸ್ ತೋರಿಸಿದ್ರು ಲಾಠಿ ರುಚಿ

UDUPI : ಮಹಿಳೆಯರನ್ನು ಚುಡಾಯಿಸಿದ ವ್ಯಕ್ತಿಗೆ, ಮಹಿಳಾ ಪೊಲೀಸ್ ತೋರಿಸಿದ್ರು ಲಾಠಿ ರುಚಿ

ಕುಡಿದ ಮತ್ತಿನಲ್ಲಿ ತೂರಾಡುತ್ತಾ ಮಹಿಳೆಯರಿಗೆ ಚುಡಾಯಿಸುತ್ತಿದ್ದ ವ್ಯಕ್ತಿಗೆ ಪೊಲೀಸರು ಎಚ್ಚರಿಕೆ ನೀಡಿದಾಗ,  ಪೊಲೀಸರಿಗೆ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರೊಬ್ಬರು ಲಾಠಿ ರುಚಿ ತೋರಿಸಿದ ಘಟನೆ ಉಡುಪಿಯ ಕುಂದಾಪುರದಲ್ಲಿ ನಡೆದಿದೆ. 
ಕುಂದಾಪುರ ನಗರದಲ್ಲಿ ವ್ಯಕ್ತಿಯೊಬ್ಬ ಕುಡಿದು ತೂರಾಡುತ್ತಾ ಮಹಿಳೆಯರಿಗೆ ಚುಡಾಯಿಸುತ್ತಿದ್ದ, ಇದನ್ನು ಗಮನಿಸಿದ  ಟ್ರಾಫಿಕ್ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಕೋಪಗೊಂಡ ವ್ಯಕ್ತಿ ಪೊಲೀಸರಿಗೆ ಹೊಡೆಯಲು ಮುಂದಾಗಿದ್ದು, ಈ ವೇಳೆ, ಎಸ್ ಐ ಸುಧಾ ಪ್ರಭು, ಲಾಠಿ ರುಚಿ ತೋರಿಸಿದ್ದಾರೆ. ಈ ಘಟನೆಯನ್ನು ಸ್ಥಳದಲ್ಲೇ ಇದ್ದವರೊಬ್ಬರು ವಿಡಿಯೋ ಮಾಡಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99