UDUPI : ಕುಂದಾಪುರ ಫ್ಲೈ ಓವರ್ ಮೇಲೆ ವಿದ್ಯುತ್ ಪ್ರವಾಹ...!
Wednesday, August 24, 2022
ಉಡುಪಿ ಜಿಲ್ಲೆ ಕುಂದಾಪುರ ಫ್ಲೈ ಓವರ್ ಮೇಲೆ ವಿದ್ಯುತ್ ಪ್ರವಹಿಸುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸ್ಥಳೀಯೋರ್ವರು ವಿದ್ಯುತ್ ಪ್ರವಹಿಸುವುದನ್ನು ಪರೀಕ್ಷಿಸಲು ಟೆಸ್ಟರ್ ಹಿಡಿದಾಗ ಫ್ಲೈ ಓವರ್ ತಡೆಗೋಡೆಯಲ್ಲಿ ವಿದ್ಯುತ್ ಹರಿಯುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಂದಾಪುರ ಫ್ಲೈ ಓವರ್ ಜನರ ಒತ್ತಾಯ ಮೇರೆ ಕಳೆದ ವರ್ಷ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಿತ್ತು. ಇತ್ತೀಚೆಗೆ ಫ್ಲೈ ಓವರ್ ಮೇಲೆ ಹಾಕಲಾಗಿರುವ ದಾರಿದೀಪದ ವಿದ್ಯುತ್ ಫ್ಲೈ ಓವರ್ ತಡೆಗೋಡೆಯಲ್ಲಿ ಮಳೆ ಬಂದಾಗ ಪ್ರವಹಿಸುತ್ತಿತ್ತು. ಹೀಗಾಗಿ ಸ್ಥಳೀಯರು ಟೆಸ್ಟರ್ ತಂದು ಪರಿಶೀಲಿಸಿದಾಗ ಟೆಸ್ಟರ್’ನಲ್ಲಿ ಬೆಳಕು ಬಂದಿದ್ದು ವಿದ್ಯುತ್ ಪ್ಲೋವಿಂಗ್ ಖಾತ್ರಿಯಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿ ಸಾರ್ವಜನಿಕರು ಕ್ರಮ ಕೈಗೊಳುವಂತೆ ಆಗ್ರಹಿಸಿದ್ದಾರೆ..