UDUPI : ನಾಯಿ ತಪ್ಪಿಸಲು ಹೋಗಿ ಮರಕ್ಕೆ ಢಿಕ್ಕಿ ಹೊಡೆದ ರಿಕ್ಷಾ : ಚಾಲಕ ಸಾವು
Wednesday, August 24, 2022
ರಿಕ್ಷಾಕ್ಕೆ ನಾಯಿ ಅಡ್ಡ ಬಂದ ಪರಿಣಾಮ, ನಾಯಿಯನ್ನು ಬದುಕಿಸಲು ಹೋಗಿ ರಿಕ್ಷಾ ಮರಕ್ಕೆ ಢಿಕ್ಕಿ ಹೊಡೆದ, ಪರಿಣಾಮ ಚಾಲಕ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಉಳ್ಳೂರು ಗ್ರಾಮದ ಅಮ್ಮುಂಜೆ ರೈಲ್ವೆ ಓವರ್ ಬ್ರಿಡ್ಜ್ ಸಮೀಪ ನಡೆದಿದೆ. ರಿಕ್ಷಾ ಚಾಲಕ ಗಣೇಶ ಪೂಜಾರಿ (53) ಸಾವನ್ನಪ್ಪಿದ ರಿಕ್ಷಾ ಚಾಲಕ.
ಹಾವಂಜೆ ಕಡೆ ತೆರಳುತ್ತಿದ್ದಾಗ ನಾಯಿಯೊಂದು ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ಚಾಲಕ, ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದ್ದು, ವೇಳೆ ತೀವ್ರ ಗಾಯಗೊಂಡ ರಿಕ್ಷಾ ಚಾಲಕನನ್ನು ಉಡುಪಿಯ ಖಾಸಗಿ ಆಸ್ಪತ್ರೆ, ಬಳಿಕ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.