
UDUPI : ಬಾಲಕಿಯ ಮೈಮೇಲೆರಗಿದ ಬೀದಿನಾಯಿಗಳು
Wednesday, August 24, 2022
ಉಡುಪಿಯ ಮಣಿಪಾಲ ಅಕಾಡೆಮಿ ಸ್ಕೂಲಿನ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಗುಂಪೊಂದು ಮೈಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಬಾಲಕಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ನಗರದಲ್ಲಿ ಬಹಳವಾಗಿ ಹೆಚ್ಚಳ ಕಂಡಿದೆ. ಹಿರಿಯ ನಾಗರಿಕರು, ಶಾಲಾ ವಿದ್ಯಾರ್ಥಿಗಳ ತಿರುಗಾಟಕ್ಕೂ ಭೀತಿ ಎದುರಾಗಿದೆ. ಸಾರ್ವಜನಿಕರ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ಬಹಳಷ್ಟು ನಡೆದಿವೆ. ಸಮಸ್ಯೆಯ ಮುಕ್ತಿಗಾಗಿ ನಗರಸಭೆ ತಕ್ಷಣವಾಗಿ ನಗರದಲ್ಲಿ ನೆಲೆ ಕಂಡಿರುವ ನೂರಾರು ಬೀದಿ ನಾಯಿಗಳನ್ನು ಸೆರೆ ಹಿಡಿದು, ಶ್ವಾನ ಪುರ್ನವಸತಿ ಕೇಂದ್ರಗಳಲ್ಲಿ ದಾಖಲಿಸುವಂತೆ ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.