
UDUPI : ಲಾಡ್ಜ್‌ನಲ್ಲಿ ಜುಗಾರಿ ಆಟ ; ಐವರು ವಶಕ್ಕೆ
ಉಡುಪಿ ಜಿಲ್ಲೆಯ ಕುಂದಾಪುರದ ಯಡ್ತಾಡಿಯ ಲಾಡ್ಜ್ ನಲ್ಲಿ ಸಂಜೆ ವೇಳೆ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಐವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಾರ್ತಿಕ್, ಕಿರಣ್, ವಿಟ್ಠಲ, ಸಂದೇಶ, ಶರಣ್ ಬಂಧಿತರು. ಕಿರಣ್ ಮೊಗವೀರ ಪೊಲೀಸರ ದಾಳಿ ವೇಳೆ ಜುಗಾರಿ ಅಡ್ಡೆಯಿಂದ ತಪ್ಪಿಕೊಂಡಿದ್ದಾನೆ.
ಆರೋಪಿಗಳಿಂದ 23,500 ರೂ. ನಗದು ಸ್ವಾಧೀನಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.