UDUPI : ಫ್ಲ್ಯಾಟ್‌ಗೆ ನುಗ್ಗಿ 1.98 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ
Friday, August 12, 2022
ಫ್ಲ್ಯಾಟ್‌ನಲ್ಲಿ ಯಾರು ಇಲ್ಲದ ವೇಳೆ ನುಗ್ಗಿದ ಕಳ್ಳರು 1.98 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರಿನಲ್ಲಿ ನಡೆದಿದೆ.ಫ್ಲ್ಯಾಟ್‌ನಲ್ಲಿ ವಾಸವಿದ್ದ ಮನೆಯೊಡತಿ ತನ್ನ ತಂಗಿಯ ಮನೆಗೆ ತೆರಳಿದ್ದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಕೈಚಳಕ ಮೆರೆದಿದ್ದಾರೆ.
ಮೂಳೂರು ಶ್ರೀ ಸಾಯಿ ವಾರ್ಚರ್ ಫ್ಲ್ಯಾಟ್‌ನಲ್ಲಿ ವಾಸವಿದ್ದ ಆರ್ಜ್ಯೂ ಸರ್ಫ್‌ರಾಜ್ ಅವರು ಆ. 8ರಂದು ಫ್ಲ್ಯಾಟ್‌ಗೆ ಬೀಗ ಹಾಕಿ, ಉಡುಪಿ ನಗರದ ತಂಗಿಯ ಮನೆಗೆ ತೆರಳಿದ್ದರು. ಈ ವೇಳೆ ಮನೆಯೊಳಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ಆರ್ಜ್ಯೂ ಸರ್ಫ್‌ರಾಜ್ ಆ. 10ರ ಬೆಳಗ್ಗೆ ಬಂದು ಕಪಾಟನ್ನು ತೆರೆದು ನೋಡುವಾಗ ಅದರ ಡ್ರಾಯರ್‌ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.