UDUPI : ಬೈಕ್ ಸ್ಕಿಡ್ ಬಿದ್ದು ಗಂಭೀರ ಗಾಯಗೊಂಡ ಶಿಕ್ಷಕಿ ಸಾವು
Friday, August 12, 2022
ದನ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯೊಂಡಿದ್ದ, ಶಿಕ್ಷಕಿ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆ ಚಿತ್ತೂರು ಬಳಿ ನಡೆದಿದೆ. ಹೆಮ್ಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅಂಬಿಕಾ (32) ಮೃತ ದುರ್ದೈವಿ.
ಗುರುವಾರ ಬೆಳಿಗ್ಗೆ ಶಿಕ್ಷಕರಾಗಿರುವ ಪತಿ ಶ್ರೀಕಾಂತ್ ಅವರೊಂದಿಗೆ ಬೈಕಿನಲ್ಲಿ ಮನೆಯಿಂದ ಹೊರಟಿದ್ದರು. ವಂಡ್ಸೆ ಸಮೀಪ ಏಕಾಏಕಿ ರಸ್ತೆಯಲ್ಲಿ ದನ ಅಡ್ಡಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ಸ್ಕಿಡ್ ಆಗಿ ಬಿದ್ದಿದ್ದಾರೆ. ಶ್ರೀಕಾಂತ್ ಅವರಿಗೆ ಸಣ್ಣಪಟ್ಟು ಗಾಯಗಳಾಗಿದ್ದರೇ, ಹಿಂಬದಿಯಲ್ಲಿ ಕುಳಿತಿದ್ದ ಅಂಬಿಕಾ ಅವರಿಗೆ ತಲೆ ಭಾಗಕ್ಕೆ ಪೆಟ್ಟು ಬಿದ್ದತ್ತು. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಅದರೆ ಚಿಕಿತ್ಸೆ ಫಲಿಸದೇ ಶಿಕ್ಷಕಿ ಅಂಬಿಕಾ ಮೃತಪಟ್ಟಿದ್ದಾರೆ.
ಅಂಬಿಕಾ ಅವರಿಗೆ ಒಂದೂವರೆ ವರ್ಷ ಮಗುವಿತ್ತು..