
UDUPI : 2 ಸಾವಿರದ ನೋಟು ಇದೆಯಾ ಕೇಳಿ, 52 ಸಾವಿರ ಎಗರಿಸಿ ಚೋರ..!
Friday, August 12, 2022
ಕಾರಿಗೆ ಡೀಸೆಲ್ ಹಾಕಿಸಲೆಂದು ಬಂದ ವ್ಯಕ್ತಿಯೊಬ್ಬ, 2 ಸಾವಿರದ ನೋಟು ಇದೆಯಾ ಎಂದು ಕೇಳಿ, ಕ್ಯಾಶ್ ಡ್ರಾವರ್‌ನಲ್ಲಿದ್ದ 52 ಸಾವಿರ ರೂ. ಹಣವ ಕದ್ದು, ಕಾರಿನಲ್ಲಿ ಎಸ್ಕೇಪ್ ಆದ ಘಟನೆ ಉಡುಪಿ ತ್ರಾಸಿಯ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.
ಜೂ.19 ರಂದು ಸಂಜೆ, ಕಾರಿನಲ್ಲಿ, ವಿದೇಶದ ವ್ಯಕ್ತಿಯಂತೆ ಕಾಣುವ ಅಪರಿಚಿತ ವ್ಯಕ್ತಿ ಡೀಸೆಲ್ ಹಾಕಿಸಲು ಬಂದಿದ್ದ. ಕಾರಿಗೆ 500 ರೂ. ಡೀಸೆಲ್ ಹಾಕಿಸಿ, ಬಳಿಕ ಕ್ಯಾಶ್ ಕೌಂಟರ್‌ನಲ್ಲಿದ್ದವರಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ, 2 ಸಾವಿರ ರೂ. ನೋಟು ಇದೆಯ ಅಂತ ಕೇಳಿದ್ದ. ಈ ವೇಳೆ ಕೌಂಟರ್‌ನಲ್ಲಿದ್ದ ವ್ಯಕ್ತಿ 1 ನೋಟು ಇದೆ ಬೇರೆ ಕಡೆ ಡ್ರಾವರ್‌ನಲ್ಲಿದೆಯಾ ಎಂದು ಕೇಳಿದ್ದರು. ಅವರು ಬೇರೆ ಕಡೆ ಗಮನ ಹರಿಸುವಂತೆ ಡ್ರಾವರ್‌ನಲ್ಲಿದ್ದ 52 ಸಾವಿರ ರೂ. ಅನ್ನು ಕಳ್ಳತನ ಮಾಡಿಕೊಂಡು, ಪರಾರಿಯಾಗಿದ್ದಾನೆ. ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ಠಾಣೆಯಲ್ಲಿ ಕೇಸು ದಾಖಲು ವಿಳಂಬಗೊಂಡಿದೆ. ಕೌಂಟರ್‌ನಲ್ಲಿದ್ದ ಮನೋಜ್ ಅವರು, ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.