
UDUPI : ನಾಯಿಯನ್ನು ಎಳೆದ್ಯೊಯಲು ಯತ್ನಿಸಿದ ಚಿರತೆ : ಸರಪಳಿಯಿಂದ ಬಚಾವಾಯ್ತು ನಾಯಿ
ಉಡುಪಿಯ ಜಿಲ್ಲೆಯ ಹೆರ್ಗಾ ಗೋಳಿಕಟ್ಟೆ ಪರಿಸರದಲ್ಲಿ ಚಿರತೆ ಕಾಟ ಜನರನ್ನು ಭಯ ಭೀತಗೊಳಿಸಿದೆ. ಹೆರ್ಗಾ ಗ್ರಾಮದ ಗೋಳಿಕಟ್ಟೆಯ ಬಾಲಚಂದ್ರ ಕೆದ್ಲಾಯ, ಅವರ ಮನೆಯ ಮುಂಭಾಗ ರಾತ್ರಿ ಕಟ್ಟಿ ಹಾಕಿದ ನಾಯಿಯನ್ನು ನಿಧಾನವಾಗಿ ಬಂದ ಚಿರತೆ ಕತ್ತು ಕಿಸುಕುವ ದೃಶ್ಯ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನಾಯಿಯನ್ನು ಸರಪಳಿಯಲ್ಲಿ ಕಟ್ಟಿ ಹಾಕಿದರು. ಹೀಗಾಗಿ ಎಳೆದ್ಯೊಯಲು ಚಿರತೆ ಬಹಳ ಪ್ರಯತ್ನ ಪಟ್ಟಿತ್ತು ಚಿರತೆ, ಈ ವೇಳೆ ಮನೆಯವರು ಲೈಟ್ ಹಾಕಿದಾಗ, ಚಿರತೆ ನಾಯಿಯನ್ನು ಬಿಟ್ಟು ಓಡಿದೆ. ಈ ಹಿಂದೆಯೂ ಭಾಗದಲ್ಲಿ ಹಲವು ಸಲ ಚಿರತೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಈ ಭಾಗದಲ್ಲಿ ಪ್ರತ್ಯಕ್ಷವಾಗಿರುವುದು ಸ್ಥಳೀಯ ನಾಗರಿಕರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಆದಷ್ಟು ಶೀಘ್ರವಾಗಿ ಬೋನು ಇರಿಸಿ ಚಿರತೆ ಹಿಡಿಯಬೇಕು ಅಂತ ಊರವರು ಆಗ್ರಹಿಸಿದ್ದಾರೆ