
UDUPI : ಮಾದಕ ವಸ್ತು ಸೇವನೆ ; ಮೂವರು ವಶಕ್ಕೆ
ಉಡುಪಿಯ ಮಣಿಪಾಲದಲ್ಲಿ ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ, ಮಣಿಪಾಲ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಪರಂಡಿ ಅಕ್ಷಯ್ (19) ಶ್ರೀರಾಗ (20) ಹಾಗೂ ಅನಂತನಗರದಲ್ಲಿ ಪಾರ್ಥಿವ್ (20)
ಪೊಲೀಸರು ವಶಕ್ಕೆ ಪಡೆದವರು.
ಮಣಿಪಾಲ ಪೊಲೀಸರು ರೌಂಡ್ಸ್‌ನಲ್ಲಿದ್ದಾಗ, ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶೀಂದ್ರ ಸೇತುವೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪರಂಡಿ ಅಕ್ಷಯ್ (19) ಶ್ರೀರಾಗ (20) ಎಂಬ ಹಾಗೂ ಅನಂತನಗರದ ಉಡುಪಿ ಗ್ರೂಪ್ ಆಫ್ ಇನಸ್ಟಿಟ್ಯೂಶನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪಾರ್ಥಿವ್ (20) ಮೂವರು ಆಮಲಿನಲ್ಲಿದ್ದಂತೆ ಕಂಡು ಬಂದಿದ್ದರು. ಹೀಗಾಗಿ ವಶಕ್ಕೆ ಪಡೆದು, ಗಾಂಜಾ ಸೇವಿಸಿರುವ ಅನುಮಾನದ ಮೇರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಅವರು ಗಾಂಜಾ ಸೇವಿಸುವುದು ದೃಢಪಟ್ಟಿದ್ದು, ಮೂವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.