UDUPI : ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ಸಂಪರ್ಕ : ಆರೋಪಿ ಬಂಧನ
Friday, August 26, 2022
ಅಪ್ರಾಪ್ತ ಯುವತಿಯನ್ನು ಮಾತಿನಿಂದ ಮರಳು ಮಾಡಿ, ಅಪಹರಿಸಿ ಲೈಂಗಿಕ ಸಂಪರ್ಕ ಹೊಂದಿದ್ದ ವ್ಯಕ್ತಿ, ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಉಪ್ಪುಂದ ಗ್ರಾಮದ ಕೋಣದ ಮನೆ ನಿವಾಸಿ ನವೀನ್ ಯಾನೇ ಸಚಿನ್ ಖಾರ್ವಿ(25) ಬಂಧಿತ ಆರೋಪಿ.
ನವೀನ್ 17 ವರ್ಷದ, ಯುವತಿಯನ್ನು ಪುಸಲಾಯಿಸಿ,
ಬಳಿಕ ಉಪ್ಪುಂದ ಶಂಕರ ಕಲಾ ಮಂದಿರದ ಬಳಿ ಹಾಡಿಯಲ್ಲಿ ಶೆಡ್ಡಿಯೊಂದರಲ್ಲಿ ಸೇರುತ್ತಿದ್ದನಂತೆ. ಆಗಸ್ಟ್ 18ರಂದು ರಾತ್ರಿ 8 ಗಂಟೆ ಸುಮಾರಿಗೆ ಅಪ್ರಾಪ್ತಯ ತಾಯಿ ಅಡುಗೆ ಮನೆಯಲ್ಲಿದ್ದ ಸಂದರ್ಭ ಯುವತಿ ಮನೆಗೆ ಬಂದ ಆರೋಪಿ ನವೀನ್ ಖಾರ್ವಿ ಸಂತ್ರಸ್ಥೆಯ ಕೈ ಹಿಡಿದು ಎಳೆದು ಅಪಹರಿಸಿಕೊಂಡು ಹೋಗಿದ್ದು, ಬಳಿಕ ಜಿರಲೆಗೆ ಹಾಕುವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಇದೀಗ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡ ತಕ್ಷಣ ಬೈಂದೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿ ಸಚಿನ್ ಯಾನೆ ನವೀನ್ ಖಾರ್ವಿಗೆ ನ್ಯಾಯಾಂಗ ಬಂಧನವಿಧಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.