
UDUPI : ಚಿರತೆ ಸಂಚಾರ : ಸಾರ್ವಜನಿಕರಲ್ಲಿ ಆತಂಕ
ಉಡುಪಿ ಜಿಲ್ಲೆಯ ಕೋಟ ಗ್ರಾಮದ ಮೂಡುಗಿಳಿಯಾರನ ಸಣ್ಣ ಬಸವನಕಲ್ಲಿನಲ್ಲಿ ಚಿರತೆ ಸಂಚಾರ ಕಾಣಿಸಿಕೊಂಡು, ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ರಸ್ತೆ ಮೇಲೆ ಓಡಾಡುತ್ತಿರುವುದನ್ನು ಕಂಡಿದ್ದಾರೆ.
ಕಳೆದ ವರ್ಷ ಇದೇ ಪರಿಸರದಲ್ಲಿ ದನ ಮೇಲೆ ಚಿರತೆ ದಾಳಿ ಮಾಡಿತ್ತು. ಈ ವರ್ಷ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಜನಸಾಮಾನ್ಯ ರಲ್ಲಿ ಭೀತಿ ಉಂಟುಮಾಡಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ತಿಳಿಸಿದ್ದು, ಬೋನು ಇರಿಸಿ ಚಿರತೆ ಹಿಡಿಯಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ..