UDUPI : ರೈಲು ಢಿಕ್ಕಿ ವಿದ್ಯಾರ್ಥಿ ಮೃತ್ಯು
Friday, August 26, 2022
ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಶಿರೂರು ಗ್ರಾಮದ ನಿರೋಡಿಯಲ್ಲಿ ನಡೆದಿದೆ. ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜು ಪಿಯು ವಿದ್ಯಾರ್ಥಿ ಸಂಪತ್ ಪೂಜಾರಿ (17) ಮೃತಪಟ್ಟ ವಿದ್ಯಾರ್ಥಿ.
ನಿರೋಡಿಯ ಅಜ್ಜಿಮನೆಯಿಂದ ಮುದ್ದುಮಕ್ಕೆ ತಂದೆ ಮನೆಗೆ ಹೋಗಲು ರೈಲ್ವೆ ಟ್ರಾಕ್‌ನಲ್ಲಿ ನಡೆಯುತ್ತಿರುವಾಗ ಭಟ್ಕಳ ಕಡೆಯಿಂದ ಬರುವ ರೈಲು ಢಿಕ್ಕಿ ಹೊಡೆದಿದೆ. ಶುಕ್ರವಾರ ಪರೀಕ್ಷೆ ಇದ್ದಿದ್ದರಿಂದ ಗುರುವಾರ ಕಾಲೇಜಿಗೆ ರಜೆ ನೀಡಲಾಗಿತ್ತು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.