
UDUPI : ಬೆಳಗ್ಗೆ ವಾಶ್ ರೂಂಗೆ ಹೋದ ಯುವತಿ ನಾಪತ್ತೆ
ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ, ಬೆಳಗ್ಗೆ 5.30ಕ್ಕೆ ಹಾಲ್‌ನಿಂದ ಎದ್ದು ವಾಶ್ ರೂಂಗೆ ಹೋಗಿದ್ದವಳು ಕಾಣೆಯದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಸಂಪಿಗೆ ನಗರದಲ್ಲಿ ನಡೆದಿದೆ. ಉದ್ಯಾವರ ಸಂಪಿಗೆ ನಗರದ ನಿವಾಸಿ ನೇತ್ರಾವತಿ (20) ಕಾಣೆಯಾದವಳು.
ಉದ್ಯಾ ವರದ ಮೊಬೈಲ್ ಶಾಪ್‌ನಲ್ಲಿ ಮೂರು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದಳು. ಆ. 22ರಂದು ರಾತ್ರಿ ಊಟ ಮಾಡಿ ಮಲಗಿದ್ದವಳು, ಆ. 23ರಂದು ಬೆಳಗ್ಗೆ ಎದ್ದು ವಾಶ್ ರೂಂಗೆ ಹೋಗಿದ್ದು, ಅಲ್ಲಿಂದ ಮರಳದೇ ಕಾಣೆಯಾಗಿದ್ದಾಳೆ.
ಕಾಣೆಯಾದ ಬಗ್ಗೆ ನೇತ್ರಾವತಿ ಅಕ್ಕ ವಿಜಯಲಕ್ಷ್ಮೀ ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.