ಇವಳೆಂತಹ ಅಮ್ಮ? ತನ್ನ ನಾಲ್ಕು ವರ್ಷದ ಮಗಳನ್ನೇ ನಾಲ್ಕನೇ ಮಹಡಿಯಿಂದ ಕೆಳಗೆಸೆದ ಮಹಿಳೆ
Saturday, August 6, 2022
ಬೆಂಗಳೂರು: ವಾಕ್ - ಶ್ರವಣ ದೋಷವಿರುವ ತನ್ನ ನಾಲ್ಕು ವರ್ಷದ ಮಗಳನ್ನೇ ಮಹಿಳೆಯೋರ್ವಳು ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಿಂದ ಕೆಳಗೆಸೆದ ಘಟನೆ ಬೆಂಗಳೂರಿನ ಎಸ್.ಆರ್ ನಗರದಲ್ಲಿ ನಡೆದಿದೆ.
ಮಗಳನ್ನು ಎಸೆದ ಬಳಿಕ ಮಹಿಳೆಯೂ ಬಾಲ್ಕನಿಯ ತಡೆ ಬೇಲಿಯ ಮೇಲೆ ಹತ್ತಿ ನಿಂತಿದ್ದು, ಇದನ್ನು ನೋಡಿದ ಆಕೆಯ ಕುಟುಂಬದ ಸದಸ್ಯರು ಓಡಿಬಂದು ಆಕೆಯನ್ನು ಹಿಂದಕ್ಕೆ ಎಳೆದು ಹಾಕಿದ್ದಾರೆ.
ಈ ಭಯಾನಕ ದೃಶ್ಯವು ಅಪಾರ್ಟ್ ಮೆಂಟ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಮಹಿಳೆ ದಂತ ವೈದ್ಯೆಯಾಗಿದ್ದು, ಆಕೆಯ ಗಂಡ ಸಾಫ್ಟ್‌ವೇರ್ ಇಂಜಿನಿಯರ್ ಎಂದು ತಿಳಿದು ಬಂದಿದೆ.
ದಂಪತಿಯ ನಾಲ್ಕು ವರ್ಷದ ಹೆಣ್ಣುಮಗುವಿಗೆ ವಾಕ್ ಮತ್ತು ಶ್ರವಣ ದೋಷವಿದ್ದು, ಇದರಿಂದಾಗಿ ಮಹಿಳೆ ಖಿನ್ನತೆಗೆ ಒಳಗಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಯ ಗಂಡನ ದೂರಿನ ಮೇರೆಗೆ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.