BJP ಗೆ SDPI, PFI ಯ ಅಗತ್ಯವಿದೆ - ಹಿಂದೂ ಮಹಾಸಭಾ
Tuesday, August 2, 2022
ಮಂಗಳೂರು: ಬಿಜೆಪಿ ಯಾವತ್ತೂ ಎಸ್‌ಡಿಪಿಐ- ಪಿಎಫ್‌ಐ ಯನ್ನು ಬ್ಯಾನ್ ಮಾಡಲ್ಲ. ಅವರಿಗೆ ಇವರ ಅಗತ್ಯವಿದೆ. ಇವರಿದ್ದರೆ ಬಿಜೆಪಿಗೆ ರಾಜಕೀಯ ಲಾಭವಿದೆ ಎಂದು ಹಿಂದೂ ಮಹಾ ಸಭಾದ ಧರ್ಮೇಂದ್ರ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆಯನ್ನು ಖಂಡಿಸಿದ ಅವರು, ವಲಸಿಗ ಬೊಮ್ಮಾಯಿಯಿಂದ ಹಿಂದೂಗಳಿಗೆ ನ್ಯಾಯ ಸಿಗಲ್ಲ. ಬಿಜೆಪಿಯಿಂದಲೂ ನ್ಯಾಯ ಸಿಗಲ್ಲ. ಹಾಗಾಗಿ ರಾಜ್ಯದಲ್ಲಿ ಯೋಗಿ ಮಾದರಿಯ ಆಡಳಿತ ಬೇಕಿದ್ದು, ಈ ಕಾರಣಕ್ಕಾಗಿ ಮುಂದಿನ ಚುನಾವಣೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಸ್ಪರ್ಧಿಸಲಿದೆ ಎಂದರು.
ಮುಂದಿನ ಚುನಾವಣೆ ನಿಟ್ಟಿನಲ್ಲಿ ಹಿಂದುತ್ವದ ಚಿಂತನೆಗಳ ಪಕ್ಷದ ಜೊತೆ ಮಾತುಕತೆ ನಡೆಸಲಿದ್ದೇವೆ ಎಂದು ಅವರು ಹೇಳಿದರು. ಹಿಂದೂ ಮಹಾಸಭಾ ಅಧಿಕಾರಕ್ಕೆ ಬಂದರೆ ಮಾತ್ರ ಹಿಂದೂಗಳ ರಕ್ಷಣೆಯಾಗಲಿದೆ ಎಂದು ಅವರು ಭರವಸೆ ನೀಡಿದರು.