
UDUPI : ಟಿಪ್ಪರ್ ಲಾರಿ ಪಲ್ಟಿ ಚಾಲಕ ಸಾವು
Wednesday, August 3, 2022
ಟಿಪ್ಪರ್ ಲಾರಿ ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ
ಉಡುಪಿಯ ಕಾರ್ಕಳ ಸೂಡ ಗ್ರಾಮದ ಜಲ್ಲಿ ಕ್ರಷರ್ ಘಟಕದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮೊಹಮ್ಮದ್ ಆಸಿಫ್ ಮೃತ ಚಾಲಕ. ಜಲ್ಲಿ ಕ್ರಷರ್ ಘಟಕದಲ್ಲಿ ಟಿಪ್ಪರ್ ಲಾರಿ ಕಲ್ಲು ಅನ್‌ಲೋಡ್ ಮಾಡುತ್ತಿದ್ದ ವೇಳೆ ಚಾಲಕನ ನಿಯಂತ್ರಣತ ಆಳವಾದ ಕಂದಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸುರೇಶ್ ಶೆಟ್ಟಿ ಅವರು ಕ್ರಷರ್ ರನ್ನು ಕೇರಳ ಮೂಲದ ವ್ಯಕ್ತಿಗೆ ಲೀಸ್ ನೀಡಿದ್ದರು. ಈ ಕ್ರಶರ್‌ನಲ್ಲಿ ಮೊಹಮ್ಮದ್ ಆಸಿಫ್ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ಸಂಜೆ ಕಲ್ಲುಗಳನ್ನು ತುಂಬಿಸಿಕೊಂಡು ಜಲ್ಲಿ ಕ್ರಷರ್‌ಗೆ ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಲಾರಿಯನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಲಾರಿ ಹಿಮ್ಮಖವಾಗಿ ಚಲಿಸಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಕಲ್ಲು ಸಹಿತ ಉರುಳಿಬಿದ್ದ ಪರಿಣಾಮ ಲಾರಿಯಲ್ಲಿದ್ದ ಚಾಲಕ ಮೊಹಮ್ಮದ್ ಆಸಿಫ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣೆಯ ಪ್ರಕರಣ ದಾಖಲಾಗಿದೆ.