Breaking News- ದ.ಕ ಜಿಲ್ಲೆಯಲ್ಲಿ ರಾತ್ರಿ ನಿರ್ಬಂಧ ಮುಂದುವರಿಕೆ
Tuesday, August 2, 2022
ಮಂಗಳೂರು: ಸರಣಿ ಹತ್ಯೆಯ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ ವರೆಗೆ ಇದ್ದ ರಾತ್ರಿ ನಿರ್ಬಂಧವನ್ನು ಮತ್ತೆ ಎರಡು ದಿನ (ಗುರುವಾರದವರೆಗೆ) ಮುಂದುವರಿಸಲಾಗಿದೆ.
ಶುಕ್ರವಾರ ಸಂಜೆ ಯಿಂದ ಆರಂಭವಾದ ಸಂಜೆ 6 ರಿಂದ ಬೆಳಿಗ್ಗೆ 6 ವರೆಗಿನ ನಿರ್ಬಂಧ ನಾಳೆ ಬೆಳಿಗ್ಗೆ ಮುಕ್ತಾಯವಾಗಬೇಕಿತ್ತು.
ಆದರೆ ಪೊಲೀಸರ ವಿನಂತಿ ಮೇರೆಗೆ ಈ ನಿರ್ಬಂಧ ಮತ್ತೆ ಎರಡು ದಿನ ( ಗುರುವಾರದವರೆಗೆ) ಮುಂದುವರಿಯಲಿದೆ ಎಂದು ದ.ಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ.