
UDUPI : ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿ ಸಾವು
Saturday, July 16, 2022
ಮುಂಬಯಿಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಮಂಗಳಾ ಲಕ್ಷದೀಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಸಾವನ್ಪಿದ ಘಟನೆ
ಉಡುಪಿಯ ಕೋಟದ ಕೆದೂರು ಎಂಬಲ್ಲಿ ಇಂದು ಸಂಭವಿಸಿದೆ.
ಮಂಗಳೂರು ಡೊಂಗರಕೇರಿ ನಿವಾಸಿ ನಿತ್ಯಾನಂದ ಶೇಟ್ (52) ಮೃತ ವ್ಯಕ್ತಿ. ಮಹಾರಾಷ್ಟ್ರದಲ್ಲಿ ಶ್ರೀಗಳೊಬ್ಬರ ಚಾತುರ್ಮಾಸ ಸಮಾರಂಭ ಮುಗಿಸಿ ಮಂಗಳೂರಿಗೆ ಬರುತ್ತಿದ್ದಾಗ ಕೆದೂರು ರೈಲ್ವೆ ಟ್ರ್ಯಾಕ್ ಸಮೀಪ ಚಲಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮೃತರು ಅವಿವಾಹಿತರಾಗಿದ್ದು, ಮಂಗಳೂರಿನ ಶಾವಿಗೆ ತಯಾರಿಕಾ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.