
UDUPI : ಉಡುಪಿಯಲ್ಲಿ 1840 ಮೀಟರ್ ಉದ್ದದಷ್ಟು ಕಡಲ ಕೊರೆತ
Saturday, July 16, 2022
ಉಡುಪಿಯಲ್ಲಿ ಸುರಿದ ಭಾರಿ ಮಳೆಯಿಂದ ಜೂನ್ ಹಾಗೂ ಜುಲೈ ತಿಂಗಳಲ್ಲಿ 1840 ಮೀಟರ್ ಉದ್ದದಷ್ಟು ಕಡಲ ಕೊರೆತ ಉಂಟಾಗಿದೆ. ಬೈಂದೂರು ತಾಲೂಕಿನ, ಮರವಂತೆ ಗ್ರಾಮದ ನಾಗಬನಬಳಿ 350 ಮೀಟರ್, ಕಿರಿಮಂಜೇಶ್ಚರದಲ್ಲಿ 200 ಮೀಟರ್, ಕಾಪು ತಾಲೂಕಿನ ಮುಳೂರಿನಲ್ಲಿ 200 ಮೀಟರ್, ಪಡುಬಿದ್ರಿಯ ನಡಿಪಟ್ನದಲ್ಲಿ 270 ಮೀಟರ್, ಕೈಪುಂಜಾಲುವಿನಲ್ಲಿ 240 ಮೀಟರ್, ಬ್ರಹ್ಮಾವರದ ಕೋಟ ಪಡುಕೆರೆಯಲ್ಲಿ 130 ಮೀಟರ್ ಹಾಗೂ ಉಡುಪಿಯ ಕುಲ್ಪಾಡಿಯಲ್ಲಿ 200 ಮೀಟರ್ ನಷ್ಟು ಕಡಲ ಕೊರೆತ ಉಂಟಾಗಿದೆ. ಕಡಲ ಕೊರೆತದಿಂದ ನೂರಾರು ತೆಂಗಿನ ಮರಗಳು ದರೆಗೆ ಉರುಳಿದ್ದು, ರಸ್ತೆ ಹಾಗೂ ಮೀನುಗಾರಿಕಾ ರಸ್ತೆಗಳಿಗೂ ಹಾಕಿಯಾಗಿದೆ. ಕಡಲ ಕೊರೆತ ತಡೆಯುವಂತೆ ಹಾಕಿದ ತಡೆಹಲ್ಲುಗಳು ಬಹುತೇಕ ಸಮುದ್ರ ಪಾಲಾಗಿದ್ದು, ಶಾಶ್ವತ ಪರಿಹಾರಕ್ಕೆ ಸಮುದ್ರ ತೀರದ ನಿವಾಸಿಗಳು ಆಗ್ರಹಿಸಿದ್ದಾರೆ..