
UDUPI : ರುದ್ರಭೂಮಿಯಲ್ಲೂ ಖದೀಮರ ಕೈಚಳಕ
Saturday, July 16, 2022
ರುದ್ರಭೂಮಿಯಲ್ಲಿ ಮೃತದೇಹ ದಹನಕ್ಕೆ ಬಳಸುವ ಕಬ್ಬಿಣದ ಚೌಕಟ್ಟಿನ ನಡುವೆ ಇದ್ದ ಸಿಲಿಕಾನ್ ಬ್ಲಾಕ್ ನ್ನು ಕಳ್ಳರು ಕದ್ದೊಯ್ಯದ ಘಟನೆ ಉಡುಪಿಯ ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಹಿಂದೂರುದ್ರ ಭೂಮಿಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ವೇಳೆ ಖದೀಮರು ಮೃತದೇಹಗಳನ್ನು ಸುಡಲು ಇಟ್ಟಿರುವ ಕಬ್ಬಿಣದ ಚೌಕಟ್ಟು(Frame)ಗಳ ನಡುವೆ ಇರುವ ದೊಡ್ಡ ನಾಲ್ಕು ಸಿಲಿಕಾನ್ ಬ್ಲಾಕ್ ಗಳ ಪೈಕಿ ಒಂದನ್ನು ಕಳವು ಮಾಡಿದ್ದಾರೆ. ಇವತ್ತು ಶವ ಸಂಸ್ಕಾರಕ್ಕೆ ತಯಾರಿ ಮಾಡುವ ಸಂದರ್ಭದಲ್ಲಿ ಸಿಲಿಕಾನ್ ಬ್ಲಾಕ್ ನಾಪತ್ತೆಯಾಗಿರುವುದು ಕಂಡು ಬಂದಿದ್ದು ಕಳವಾದ ಸೊತ್ತು ಪತ್ತೆ ಹಚ್ಚಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ರುದ್ರಭೂಮಿ ವ್ಯವಸ್ಥಾಪನ ಸಮಿತಿಯ ಸಂಚಾಲಕ ಪ್ರಕಾಶ್ ರಾವ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.