
UDUPI : ಶೂ ಹಿಂದಿರುಗಿಸಲು ಹೋಗಿ 39,061 ಕಳೆದುಕೊಂಡ್ರು..!
ಆನ್ಲೈನ್‌ನಲ್ಲಿ ಖರೀದಿ ಮಾಡಿದ ಶೂ, ಇಷ್ಟವಾಗದೇ ಹಿಂದಿರುಗಿಸಲು ಹೋದ ವ್ಯಕ್ತಿಯೊಬ್ಬರು ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ ಬ್ಯಾಂಕ್ ಖಾತೆಯಿಂದ 39,061 ರೂ. ಕಳೆದುಕೊಂಡ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ.
ವಸಂತ ಶೆಟ್ಟಿ ಎಂಬುವರು ಬ್ರಹ್ಮಾವರದ ಬ್ಯಾಂಕ್ ಕಾರ್ಡ್ ಹೊಂದಿದ್ದು, ಈಚೆಗೆ ಖರೀದಿಸಿದ್ದ ಶೂವನ್ನು ಹಿಂದಿರುಗಿಸಲು ಜುಲೈ 13ರಂದು ಕರೆ ಮಾಡಿದ್ದಾರೆ. ಈ ವೇಳೆ ಶೂ ಹಣವನ್ನು ಹಿಂತಿರುಗಿಸಲು ಕ್ರೆಡಿಟ್ ಕಾರ್ಡ್ ವಿವರ ಒದಗಿಸುವಂತೆ ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿದ ವಸಂತ ಶೆಟ್ಟಿ ಕ್ರೆಡಿಟ್ ಕಾರ್ಡ್ ವಿವರ ಒದಗಿಸಿದ್ದು, ವಂಚಕರು, ಕ್ರಮವಾಗಿ ರೂ. 20,290, ರೂ. 15,217, ರೂ. 3,554 ಸೇರಿ ಒಟ್ಟು ರೂ. 39,061 ಹಣವನ್ನು ಆನ್‌ಲೈನ್ ಮೂಲಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸೆನ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ..