UDUPI: ಗಾಳಿ, ಮಳೆಗೆ ಬಿರುಕು ಬಿಟ್ಟ ಶಾಲಾ ಗೋಡೆ
Friday, July 1, 2022
ಉಡುಪಿಯಲ್ಲಿ ಸುರಿದ ಬಾರೀ ಗಾಳಿ ಮಳೆಯಿಂದಾಗಿ ಕಾಪು ತಾಲೂಕಿನ ಮಲ್ಲಾರು ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಯ ಮೇಲ್ಚಾವಣಿಯ ಹಂಚು ಗಾಳಿಗೆ ಬಿದ್ದು ಅವಾಂತರ ಸೃಷ್ಟಿಸಿದೆ.
ಶತಮಾನ ಪೂರೈಸಿದ ಉರ್ದು ಶಾಲೆಯ ಹಳೆ ಕಟ್ಟಡದಲ್ಲಿ ಮೌಲಾನಾ ಆಜಾದ್ ಶಾಲೆಯು ನಡೆಯುತ್ತಿದ್ದು ಕೊಠಡಿ ಕೋಣೆಗಳು ಬಿರುಕು ಬಿಟ್ಟು, ಗಾಳಿ ಮಳೆಯಿಂದಾಗಿ ಕೆಲವು ಕೋಣೆಗಳ ಮೇಲ್ಚಾವಣಿಯ ಹಂಚುಗಳು ಕೂಡಾ ಹಾರಿ ಹೋಗಿವೆ. ಇದರಿಂದಾಗಿ ಮೇಲ್ಚಾವಣಿಯ ಗೋಡೆ ಬಿರುಕು ಬಿಟ್ಟಿದೆ.