UDUPI: ನಿಂತ ನೀರಲ್ಲಿ ಭರ್ಜರಿ ಮೀನಿನ ಬೇಟೆ
Friday, July 1, 2022
ಉಡುಪಿಯಲ್ಲಿ ಸುರಿದ ಬಾರೀ ಮಳೆಯಿಂದ ಕೆಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ನೀರು ನಿಂತ ಜಾಗದಲ್ಲಿ ದೊಡ್ಡ ದೊಡ್ಡ ಮೀನುಗಳು ಕಾಣಿಸಿಕೊಂಡೊದ್ದು, ಉಡುಪಿ ಜಿಲ್ಲೆಯ ಕುಂದಾಪುರದ ಮಲ್ಯಾಡಿಯ ಯುವಕರ ತಂಡ ಭರ್ಜರಿ ಮೀನಿನ ಬೇಟೆಯಾಡಿದ್ದಾರೆ.
ಐವತ್ತಕ್ಕೂ ಹೆಚ್ಚಿನ ಯುವಕರ ತಂಡ ಗದ್ದೆಯಲ್ಲಿ ಮೀನು ಹಿಡಿಯುವ ಬಲೆಯ ಸಹಾಯದಿಂದ ಮೀನು ಹಿಡಿದಿದ್ದಾರೆ. ವಿವಿಧ ಬಗೆಯ ನದಿ ಮೀನುಗಳು ಬಲೆಗೆ ಬಿದ್ದಿದ್ದು, ಮತ್ಸ್ಯ ಪ್ರಿಯರು ಸಂತಸಗೊಂಡಿದ್ದಾರೆ..