UDUPI : ಡಿಕೆಶಿ ಉತ್ಸವ ಯಾವಾಗ ನಡೆಯುತ್ತೆ ? ಕೇಂದ್ರ ಸಚಿವೆ ಶೋಭಾ ಲೇವಡಿ
Monday, July 11, 2022
ಕಾಂಗ್ರೆಸ್‌ನ ಸಿದ್ದರಾಮಯ್ಯೋತ್ಸವ ವಿಚಾರ ರಾಜ್ಯದಲ್ಲಿ ಭಾರಿ ಸುದ್ದಿಯಾಗುತ್ತಿದ್ದು, ಈ ಕುರಿತು ಉಡುಪಿಯ ಕಾಪುವಿನಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಡಿಕೆಶಿ ಉತ್ಸವ ಯಾವಾಗ ನಡೆಯುತ್ತೆ ಅಂತ ಗೊತ್ತಿಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಗೊಂದಲದಿಂದ ಈ ಉತ್ಸವ ನಡೆಯುತ್ತಿದೆ ಅಂತ ವ್ಯಂಗ್ಯವಾಡಿದ್ದಾರೆ.
ರಾಜ್ಯದ ಜನರ ಉತ್ಸವ ಬೇರೆನೇ ಆಗಬೇಕಿದೆ. ಸಿದ್ದರಾಮಯ್ಯೋತ್ಸವ, ಡಿಕೆ ಉತ್ಸವ ಹೌದು, ಆದ್ರೆ ಕಾಂಗ್ರೆಸ್ಸಿನ ಉತ್ಸವ ಯಾವಾಗ ಅದನ್ನು ಕಾದು ನಾವು ನೋಡಬೇಕಿದೆ ಅಂತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.