UDUPI : ನೆರೆ ಪೀಡಿತರಿಗೆ ದಿನಸಿ ಕಿಟ್ ವಿತರಣೆ
Tuesday, July 12, 2022
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ, ಬಡಾಕೆರೆ, ಸಾಲ್ಬುಡ ಪ್ರದೇಶ ಭಾರಿ ಮಳೆಯಿಂದ ತತ್ತರಿಸಿ ಹೋಗಿತ್ತು. ನೆರೆ ನೀರಿನಿಂದ ಮನೆಯಿಂದ ಹೊರ ಹೋಗುದಕ್ಕೂ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮನೆಯಲ್ಲಿ ಆಹಾರ ಸಾಮಾಗ್ರಿಗಳು ನೀರಿನಲ್ಲಿ ಹಾಳಾಗಿತ್ತು. ಇಂತಹ ಪ್ರದೇಶಗಳಿಗೆ ಉದ್ಯಮಿ, ಗೋವಿಂದ ಬಾಬು ಪೂಜಾರಿ ಭೇಟಿ ನೀಡಿ, ನೆರೆ ಪೀಡಿತ ಪ್ರದೇಶದ ಮನೆಗಳಿಗೆ ದಿನಸಿ ಕಿಟ್ ಹಂಚಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಮನೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿರುವ ಗೋವಿಂದ ಬಾಬು ಪೂಜಾರಿ, ಮನೆ ಕಳೆದುಕೊಂಡ ಕುಟುಂಬಕ್ಕೆ ಸಹಾಯ ಧನ ನೀಡುವ ಭರವಸೆ ನೀಡಿದ್ದಾರೆ.