
UDUPI : ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಬೆಂಗಾವಲಿನ ವಾಹನ ಪಲ್ಟಿ
ಸಚಿವ ಕೋಟ ಶ್ರೀನಿವಾಸ ಅವರ ಬೆಂಗಾವಲಿನ ವಾಹನ ಅಪಘಾತಕೀಡಾದ ಘಟನೆ ಉಡುಪಿಯ ಸಂತೆಕಟ್ಟೆ ಕೆಜಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಎಸ್ಕಾರ್ಟ್ ಸಿಬ್ಬಂದಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಚಿವರ, ಬೆಂಗಾವಲು ವಾಹನದ ಮುಂದೆ ಸಂಚರಿಸುತಿದ್ದ ಲಾರಿ ಸೂಚನೆ ನೀಡದೆ ಏಕಾಏಕಿ ಪಥ ಬದಲಿಸಿದ ಕಾರಣ, ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿವೈಡರ್ ಮೇಲೆ ಬಿದ್ದು ಪಲ್ಟಿಯಾಗಿದ್ದು, ಬೆಂಗಾವಲು ಸಿಬ್ಬಂದಿ ಗಣೇಶ್ ಆಳ್ವ ರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅವರನ್ನು , ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.