
UDUPI : ಮೀನಿನ ಮಿನಿ ಟೆಂಪೋ ಪಲ್ಟಿ
Tuesday, July 12, 2022
ಮೀನಿನ ಮಿನಿ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉಡುಪಿಯ ಪಾಂಗಾಳ ಸೇತುವೆ ಬಳಿ ನಡೆದಿದೆ.
ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. ಮೀನಿನ ಟೆಂಪೋ ಉಡುಪಿ ಕಡೆಯಿಂದ ಕಾಪು ಕಡೆ ತೆರಳುತ್ತಿತ್ತು. ಪಾಂಗಳ ಸೇತುವೆ ಬಳಿ ಹೋಗುತ್ತಿದ್ದಾಗ, ನಾಯಿ ಅಡ್ಡ ಬಂದಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಅಪಘಾತದಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಸ್ಥಳೀಯ ಪೊಲೀಸರು ಅಗಮಿಸಿ ಟೆಂಪೋ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.