
UDUPI : ಮೊಬೈಲ್ ಅಂಗಡಿಯಲ್ಲಿ ಕಳವುಗೈದ ನಾಲ್ವರ ಬಂಧನ
ಉಡುಪಿಯ ಬೈಂದೂರು ತಾಲೂಕಿನ ಉಪ್ಪುಂದದ ಮೊಬೈಲ್ ಅಂಗಡಿಯೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮುರುಡೇಶ್ವರ ಮಾವಳ್ಳಿಯ ನಿವಾಸಿಗಳಾದ ಮೊಹಮ್ಮದ್ ಇಫ್ಜಲ್ (27), ಮಹಮ್ಮದ್ ಅಸೀಮ್ ಡೊನ್ನಾ (20), ಮಹಮ್ಮದ್ ರಫಿ (21) ಹಾಗೂ ಭಟ್ಕಳದ ಮೊಹಮ್ಮದ್ ರಾಹಿಕ್ (22) ಬಂಧಿತರು.
ಪ್ರಶಾಂತ್ ಎಂಬುವವರ, ಮೊಬೈಲ್ ಅಂಗಡಿಯಲ್ಲಿ ಜು.5 ರಂದು ರಾತ್ರಿ ಅಂಗಡಿಯ ಶೆಟರ್ ಮುರಿದು ಕಳ್ಳತನ ನಡೆಸಿದ್ದರು. ಅಂಗಡಿಯಲ್ಲಿದ್ದ 3500 ರೂ. ನಗದು, 25 ಸಾವಿರ ರೂ. ಬೆಲೆಬಾಳುವ 17 ಕೀ ಪ್ಯಾಡ್ ಮೊಬೈಲ್ ಪೋನುಗಳು ಹಾಗೂ 5 ಸಾವಿರ ರೂ. ಮೌಲ್ಯದ ಮೊಬೈಲ್ ಗೆ ಉಪಯೋಗಿಸುವ ಪವರ್ ಬ್ಯಾಂಕ್ ಹಾಗೂ ಬ್ಲೂಟೂತ್ ಹೀಗೆ, ಒಟ್ಟು ಮೌಲ್ಯ ರೂಪಾಯಿ 33,500 ರೂ. ಕಳವು ಮಾಡಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.