
UDUPI ; ಬೋಳ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದಲ್ಲಿ ಕಳವು
ಉಡುಪಿಯ ಕಾರ್ಕಳದ ಬೋಳ ಗ್ರಾಮದ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನಕ್ಕೆ ರಾತ್ರಿ ವೇಳೆ ನುಗ್ಗಿದ್ದ ಕಳ್ಳರು ದೇವಸ್ಥಾನದ ಅಮೂಲ್ಯ ವಸ್ತುಗಳನ್ನು ಕಳವು ಮಾಡಿದ್ದಾರೆ.
ದೇವಸ್ಥಾನದ ಹಿಂಬದಿಯ ಬಾಗಿಲು ಒಡೆದು ದೇಗುಲದ ಒಳ ಪ್ರವೇಶಿಸಿ, ದೇವಸ್ಥಾನದ ಲಾಕರ್ ಒಡೆಯುವ ವಿಫಲ ಪ್ರಯತ್ನ ನಡೆಸಿದ್ದಾರೆ. ಇದಲ್ಲದೆ ಸಿಸಿ ಕ್ಯಾಮೆರಾದ ಡಿ ವಿ ಆರ್ ನ್ನೇ ಕದ್ದೊಯ್ಯಿದಿದ್ದು ಪಂಚಲೋಹದ ಬಲಿಮೂರ್ತಿ ಸೇರಿದಂತೆ ಲಕ್ಷಾಂತರ ರೂಪಾಯಿಯ ವಸ್ತುಗಳನ್ನು ಕಳವು ಮಾಡಲಾಗಿದೆ.