UDUPI : ಮಳೆ ಅಬ್ಬರಕ್ಕೆ ಮನೆ ಕುಸಿತ
Monday, July 11, 2022
ಭಾರಿ ಮಳೆಗೆ ಉಡುಪಿಯ ಬೈಂದೂರಿನ ಕೆರಾಡಿ ಗ್ರಾಮದ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
ನಂದ್ರೊಳ್ಳಿ ಕ್ಷೇತ್ರಪಾಲ ಎಂಬಲ್ಲಿಯ ಜಾನಕಿ ಎಂಬವರ ಮನೆಯಲ್ಲಿ, ಮೊದಲು ಒಳ ಛಾವಣಿಯ ಹಂಚು ಹಾಗೂ ಗೋಡೆಗಳು ಕುಸಿಯುವ ಸದ್ದಿಗೆ ಮನೆಯವರಿಗೆ ಎಚ್ಚರವಾದ್ದರಿಂದ ಅದೃಷ್ಟವಶಾತ್ ಮನೆಯವರೆಲ್ಲರೂ ಹೊರ ಹೋಗಿದ್ದು, ಜೀವ ಹಾನಿಯಿಂದ ಪಾರಾಗಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಮನೆಯ ಹೊರ ಛಾವಣಿಯ ಗೋಡೆಗಳು ಬಿರುಕುಬಿಟ್ಟು ಮುಂಭಾಗವು ಕುಸಿದು ಮನೆ ಸಂಪೂರ್ಣ ಹಾನಿಯಾಗಿದೆ.