
UDUPI : ಅಳಿಯನಿಂದ ಮಾವನಿಗೆ ಜೀವಬೆದರಿಕೆ, ಸ್ಕೂಟರ್‌ನಿಂದ ಎಳೆದ ಹಾಕಿ ಹಲ್ಲೆ
Wednesday, July 27, 2022
ಅಳಿಯನೋರ್ವ ಮಾವನನ್ನು ಸ್ಕೂಟರಿನಿಂದ ಎಳೆದು ಹಾಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿ ನಡೆದಿದೆ. ಮದರ್ ಹೌಸ್ ನಿವಾಸಿ ಮುಸ್ತಾಫಾ ಹಸನಬ್ಬ (65) ಹಲ್ಲೆಗೊಳಗಾದವರು. ಮುಸ್ತಾಫಾ ಹಸನಬ್ಬ ಅವರ, ಮಗಳ ಗಂಡ ಮಹಮ್ಮದ್ ಮುಸ್ತಕ್ ಸೇರಿ ಐವರು ಹಲ್ಲೆ ನಡೆಸಿದ್ದಾರೆ ದೂರಲಾಗಿದೆ. ಮುಸ್ತಾಫಾ ಹಜನಬ್ಬ ಅವರ ಪುತ್ರಿ ಖತೀಜಮ್ಮ ತೌಸಿಯಾ ಅವರನ್ನು ಮಂಗಳೂರು ಮಹಮ್ಮದ್ ಮುಸ್ತಕ್ ಎಂಬಾತನಿಗೆ 2009ರಲ್ಲಿ ವಿವಾಹ ಮಾಡಿಕೊಡಲಾಗಿತ್ತು.
5 ವರ್ಷಗಳ ಹಿಂದೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಆರೋಪಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ವಾಪಸು ಪಡೆಯಲು ಒತ್ತಡ ಹೇರುತ್ತಿದ್ದ. ಅದೇ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾನೆ ಅಂತ ಮುಸ್ತಾಫಾ ಹಸನಬ್ಬ ದೂರು ನೀಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.