-->

ಅತ್ಯುತ್ತಮ ವೆಬ್ ಸೈಟ್ ವರದಿಗೆ ಬಿ ಜಿ ಮೋಹನ್ ದಾಸ್ ಪ್ರಶಸ್ತಿ 2022 ಗೆ ಅರ್ಜಿ ಆಹ್ವಾನ

ಅತ್ಯುತ್ತಮ ವೆಬ್ ಸೈಟ್ ವರದಿಗೆ ಬಿ ಜಿ ಮೋಹನ್ ದಾಸ್ ಪ್ರಶಸ್ತಿ 2022 ಗೆ ಅರ್ಜಿ ಆಹ್ವಾನ



ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ  - ಇವರ ಜಂಟಿ ಆಶ್ರಯದಲ್ಲಿ  ಎರಡನೇ ವರ್ಷದ ಅತ್ಯುತ್ತಮ ವೆಬ್‍ಸೈಟ್ (ಅಂತರ್ಜಾಲ) ವರದಿಗೆ
ರಾಜ್ಯ ಮಟ್ಟದ ಬಿ. ಜಿ. ಮೋಹನ್‍ದಾಸ್ ಪ್ರಶಸ್ತಿ - 2022ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶಸ್ತಿಯು ರೂ. 5000 ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಗೆ ಕನ್ನಡ ವೆಬ್‍ಸೈಟ್‍ನಲ್ಲಿ ಪ್ರಕಟಗೊಂಡ ವರದಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಪತ್ರಿಕಾ ಸಂಸ್ಥೆಗಳ ವೆಬ್ ಸೈಟ್ ವರದಿಗಳನ್ನು ಪರಿಗಣಿಸಲಾಗುವುದು.
2021 ಜುಲಾಯಿ 1ರಿಂದ ಜೂನ್ 30 2022 ರ ವರೆಗೆ ಪ್ರಕಟವಾದ ಮಾನವೀಯ ಮೌಲ್ಯ, ಗ್ರಾಮೀಣ ಸಮಸ್ಯೆ, ತನಿಖಾ ಆಧಾರಿತ ವರದಿ, ಎಕ್ಸ್ ಕ್ಲೂಸಿವ್ ಸೇರಿದಂತೆ ಅತ್ಯುತ್ತಮ ವರದಿಗಳಲ್ಲಿ ಓರ್ವರನ್ನು ಆಯ್ಕೆ ಮಾಡಲಾಗುವುದು. ಒಬ್ಬ ಪತ್ರಕರ್ತರಿಗೆ ಒಂದು ವರದಿ ಕಳುಹಿಸಲು ಮಾತ್ರ ಅವಕಾಶವಿದೆ.ಆಯ್ಕೆಗೆ ವರದಿಯ ಮುದ್ರಿತ 3 ಪ್ರತಿಗಳನ್ನು ಕೆಳಗೆ ನೀಡಿರುವ ವಿಳಾಸಕ್ಕೆ  ಆಗಷ್ಟ್ 10 ರೊಳಗೆ ಕಳುಹಿಸಿಕೊಡಬೇಕು.ಮುದ್ರಿತ ವರದಿಯ ವೆಬ್‍ಸೈಟ್ ಲಿಂಕ್ (URL Adress) ನ್ನು ಕಡ್ಡಾಯವಾಗಿ 9844619763 ಈ ನಂಬರಿಗೆ ವಾಟ್ಸಪ್ ಮಾಡಬೇಕು. ನಿರ್ಣಾಯಕರ ತೀರ್ಮಾನವೇ ಅಂತಿಮ. ಯಾವುದೇ ಚರ್ಚೆಗೆ ಆಸ್ಪದವಿಲ್ಲ.

ವರದಿಯನ್ನು ಕಳುಹಿಸಬೇಕಾದ ವಿಳಾಸ :

ದಿನೇಶ್ ಎನ್. ತುಂಬೆ,
ಕಾರ್ಯದರ್ಶಿ, 
ನಿರತ ಸಾಹಿತ್ಯ ಸಂಪದ,
ಪ್ರಗತಿ ಪ್ರಿಂಟರ್ಸ್, ತುಂಬೆ - 574 143
ಬಂಟ್ವಾಳ ತಾಲೂಕು, ದ. ಕ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99