UDUPI : ಬಿಜೆಪಿ ಕೋಟ ಯುವಮೊರ್ಚ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ
Wednesday, July 27, 2022
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಿಂದ ಬೇಸರಗೊಂಡ ಬಿಜೆಪಿ ಕೋಟ ಯುವಮೊರ್ಚ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ ರಾಜಿನಾಮೆ ಘೋಷಿಸಿದ್ದಾರೆ. ಸಚಿವ ಶ್ರೀನಿವಾಸ ಪೂಜಾರಿಯವರ ಕ್ಷೇತ್ರದಲ್ಲಿ ಯುವ ಸಂಘಟಕರಾಗಿದ್ದ, ಸುಶಾಂತ್, ಪಕ್ಷ ಹಾಗೂ ಸಂಘಟನೆಗಾಗಿ ಕೆಲಸ ಮಾಡುತ್ತಿರುವರನ್ನು ಕೊಲೆ ಮಾಡುತ್ತಿದ್ದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ರಾಜ್ಯ ಸರ್ಕಾರದವರ ಕಠಿಣ ಕ್ರಮ ಎಂಬ ಪೊಳ್ಳು ಭರವಸೆ ನೀಡಿ ಆರೋಪಿಗಳನ್ನು ಬಂಧಿಸಿದಂತೆ ಮಾಡಿದರೂಕೂಡ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದೆ ಹಲವರು, ಇಂದು ಪ್ರವೀಣ್, ನಾಳೆ ಸಾಲಿನಲ್ಲಿ ನಮ್ಮ ಸಹಿತ ಮತ್ತೊಬ್ಬರು ಎನ್ನುವಂತಾಗಿದೆ. ನಿರಂತರವಾಗಿ ನೋವು ಪಡುತ್ತಿದ್ದೇವೆ ಅದಕ್ಕಾಗಿ ಈ ರಾಜಿನಾಮೆ ಪ್ರಶ್ನೆ ತೀರ್ಮಾನ ಮಾಡಿದ್ದೇನೆ ಅಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.