UDUPI : ಗುಡ್ಕಾ ಅಂತ ಇಲಿ ಪಾಶಾಣ ತಿಂದ ವ್ಯಕ್ತಿ ಸಾವು
Tuesday, July 19, 2022
ಗುಟ್ಕಾ ಎಂದು ತಿಳಿದು ಮನೆಯಲ್ಲಿದ್ದ ಇಲಿ ಪಾಶಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಇಂದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕೋಟದ ಮಣೂರಿನ ಎಂಬಲ್ಲಿ ನಡೆದಿದೆ. ಮಣೂರಿನ ನಾರಾಯಣ ಖಾರ್ವಿ (58) ಮೃತಪಟ್ಟವರು.
ಕುಡಿತದ ಚಟ ಹೊಂದಿದ್ದ ನಾರಾಯಣ ಖಾರ್ವಿ, ಜು.13 ರಂದು ಕುಡಿತದ ಅಮಲಿನಲ್ಲಿ ಗುಟ್ಕಾ ಪ್ಯಾಕೆಟ್ ಎಂದು ತಿಳಿದು ಇಲಿ ಪಾಶಾಣ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.