
UDUPI : ಮಾದಕ ವಸ್ತು ಸೇವನೆ ಪ್ರಕರಣ : ಓರ್ವ ವಶಕ್ಕೆ
ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಉಡುಪಿಯ ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಪು ಪೊಲೀಸ್ ಠಾಣಾ ಪಿಎಸ್‌ಐ ಶ್ರೀಶೈಲ್ ಡಿ. ಮುರಗೋಡ , ನಿನ್ನೆ ಬೆಳಿಗ್ಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ವೇಳೆ ಏಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಹತ್ತಿರ ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ಅಶ್ಲೇಷ್ ಎ.ಕೋಟ್ಯಾನ್ ಎಂಬಾತನ್ನು ವಶಕ್ಕೆ ಪಡೆದಿದರು.
ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇಂದು ಲಭ್ಯವಾದ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಆಕ್ಷೇಷ್ ಎ.ಕೋಟ್ಯಾನ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಕುರಿತುಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.