UDUPI : ಮಿಸ್ ವರ್ಲ್ಡ್ ಆಗಿ ಬರುವಂತೆ ಹರಸು ತಾಯಿ ; ಕಾಪು ಮಾರಿಯಮ್ಮ ದೇವಿಯಲ್ಲಿ ಸಿನಿ ಶೆಟ್ಟಿ ಪ್ರಾರ್ಥನೆ
Tuesday, July 19, 2022
ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಸಿನಿ ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ದೇವಿ ದರ್ಶನ ಪಡೆದರು. ಸಿನಿ ಶೆಟ್ಟಿ ಅವರು ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರಾದ ಬಳಿಕ ಪ್ರಥಮ ಬಾರಿಗೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ್ದು ದೇಗುಲದ ಆಡಳಿತ ಮಂಡಳಿಯವರು ಆತ್ಮೀಯವಾಗಿ ಬರಮಾಡಿಕೊಂಡರು.
ಕಾಪು ಶ್ರೀ ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಿನಿ ಶೆಟ್ಟಿ ಅವರಿಗೆ, ದೇವಸ್ಥಾನದಲ್ಲಿ ಪ್ರಸಾದ ನೀಡಿ ಗೌರವಿಸಲಾಯಿತು. ತಾನು ಮಾರಿಯಮ್ಮ ದೇವಿಯ ಭಕ್ತಿಯಾಗಿದ್ದು ಎಳೆವೆಯಿಂದಲೂ ತಂದೆ, ತಾಯಿಯೊಂದಿಗೆ ಇಲ್ಲಿಗೆ ಬರುತ್ತಿದ್ದೆ. ಈಗ ಮಿಸ್ ಇಂಡಿಯಾಗಿ ಆಗಿ ಬರುತ್ತಿರುವದಕ್ಕೆ ಮಾರಿಯಮ್ಮ ದೇವಿಯ ಅನುಗ್ರಹವೇ ಮುಖ್ಯ ಕಾರಣ. ಮುಂದೆ ತಾಯಿ ಅನುಗ್ರಹದಿಂದ ಮಿಸ್ ವರ್ಲ್ಡ್ ಆಗಿಯೂ ಬರುವಂತಾಗಲಿ ಎಂದು ಪ್ರಾರ್ಥನೆ ದೇವರ ಮುಂದಿಟ್ಟಿದ್ದೇನೆ ಅಂತ ಸಿನಿ ಶೆಟ್ಟಿ ಹೇಳಿದರು.