-->

BRA  ಬಿಚ್ಚಿಸಿ ನೀಟ್ ಪರೀಕ್ಷೆ ಬರೆಸಿದ ಪ್ರಕರಣ- ಐವರು AREST

BRA ಬಿಚ್ಚಿಸಿ ನೀಟ್ ಪರೀಕ್ಷೆ ಬರೆಸಿದ ಪ್ರಕರಣ- ಐವರು AREST

 


 

ತಿರುವನಂತಪುರ:  ಆದಿತ್ಯವಾರ ನಡೆದ  ನೀಟ್ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿನಿಯರಿಗೆ ಒಳಉಡುಪು (ಬ್ರಾ)  ತೆಗೆಯುವಂತೆ ಹೇಳಿದ ಆರೋಪದ ಮೇಲೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

ಪ್ರಕರಣದ ತನಿಖೆ ನಡೆಸಿದ ಪೊಲೀಸರು  ಸುದೀರ್ಘ ವಿಚಾರಣೆಯ ನಂತರ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸರು  ತಿಳಿಸಿದ್ದಾರೆ. ಮೂವರು ಮಹಿಳೆಯರು ಎನ್‌ಟಿಎಯಿಂದ ನೇಮಕಗೊಂಡ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರೆ, ಇಬ್ಬರು ಘಟನೆ ನಡೆದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

 

ಘಟನೆ ಏನು?

 

ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ( NEET ) ಗೆ ಹಾಜರಾದ ನೂರಾರು ವಿದ್ಯಾರ್ಥಿನಿಯರಿಗೆ ಒಳ ಉಡುಪು (ಬ್ರಾ) ತೆಗೆದು ಪರೀಕ್ಷೆ ಬರೆಯಲು ಸೂಚಿಸಿದಘಟನೆ ಕೇರಳದ ಕೊಲ್ಲಂಜಿಲ್ಲೆಯಲ್ಲಿ ನಡೆದಿತ್ತು.

 

ವಿದ್ಯಾರ್ಥಿನಿಯರಲ್ಲಿ ಬ್ರಾ ತೆಗೆಯುವಂತೆ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ತೀವ್ರ ಮುಜುಗರಕ್ಕೀಡಾಗಿದ್ದರು . ಕೊಲ್ಲಂ  ಜಿಲ್ಲೆಯಲ್ಲಿರುವ ಮಾರ್ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ಸಂಸ್ಥೆಯಲ್ಲಿ  ಆದಿತ್ಯವಾರ ನೀಟ್ ಪರೀಕ್ಷೆ ಬರೆಯುವ ವೇಳೆ ಘಟನೆ ನಡೆದಿತ್ತು

 

ಮೆಟಲ್ ವಸ್ತುಗಳನ್ನು ಪರೀಕ್ಷಾ ಕೇಂದ್ರದಲ್ಲಿ ಕೊಂಡೊಯ್ಯುವಂತಿಲ್ಲ ಎಂಬ ನಿಯಮವಿದ್ದು, ಅದರಂತೆ , ವಿದ್ಯಾರ್ಥಿಗಳನ್ನು ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಲಾಗಿತ್ತು .   ವೇಳೆ ಅಧಿಕಾರಿಗಳಿಗೆ ಅನುಮಾನ ಬಂದಿದ್ದು ಆಗ ಅವರು ಒಳಉಡುಪುಗಳನ್ನು ಬಿಚ್ಚಿಟ್ಟೇ ಹೋಗಬೇಕು ಎಂದು ಆದೇಶಿಸಿದ್ದಾರೆ.   ಕಾರಣ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಒಳಉಡುಪುಗಳನ್ನು ಬಿಚ್ಚಿಟ್ಟು ಪರೀಕ್ಷೆ ಬರೆಯಬೇಕಾಯಿತು.

 

 BRA ಸೇರಿ ಹಲವು ಒಳಉಡುಪಗಳು ಹುಕ್ಗಳನ್ನು ಹೊಂದಿದ್ದು , ಇದು ಮೆಟಲ್ ಡಿಟೆಕ್ಟರ್ನಲ್ಲಿ ಪತ್ತೆಯಾಗಿದೆ . ಇದರಿಂದ  ಮಕ್ಕಳು ಮುಜುಗರ ಅನುಭವಿಸಬೇಕಾಯಿತು  ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು.

 

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99