UDUPI ; ಸಿನಿ ಶೆಟ್ಟಿಗೆ ಹುಟ್ಟೂರ ಸನ್ಮಾನ ; ಅಜ್ಜಿಯನ್ನು ಬಿಗಿದಪ್ಪಿ ಭಾವುಕಳಾದ ಮಿಸ್ ಇಂಡಿಯಾ
Tuesday, July 19, 2022
ಮಿಸ್ ಇಂಡಿಯ 2022 ಕಿರೀಟ ಮುಡಿಗೇರಿಸಿಕೊಂಡ ಸಿನಿ ಶೆಟ್ಟಿ ಇಂದು ಹುಟ್ಟೂರು ಉಡುಪಿಗೆ ಆಗಮಿಸಿ, ಸನ್ಮಾನ ಸ್ವೀಕರಿಸಿದರು. ಉಡುಪಿಗೆ ಆಗಮಿಸಿದ ಸಿನಿ ಶೆಟ್ಟಿ ಅವರನ್ನು
ನಗರದ ಜೋಡು ಕಟ್ಟಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ನಗರದ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಕರೆ ತರಲಾಯಿತು. ಸಭಾಂಗಣದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮಿಸ್ ಇಂಡಿಯಾ ಸಿನಿ ಶೆಟ್ಟಿ, ಅಜ್ಜಿಯನ್ನು ಕಂಡು ಭಾವುಕರಾದರು.
ಅಜ್ಜಿಯನ್ನು ಬಿಗಿದಪ್ಪಿಕೊಂಡು, ಮಾತನಾಡಿಸಿದ ಸಿನಿ ಶೆಟ್ಟಿ, ನನ್ನ ಬಾಲ್ಯದಿಂದಲೂ ಅಜ್ಜಿ ನನಗೆ ಬೆಂಬಲವಾಗಿದ್ದರು. ನಾನು ಎಲ್ಲೇ ಹೋದರು ಯಾವುದೇ ಉಡುಗೆ ತೊಟ್ಟರೂ ನನಗೆ ಬೆಂಬಲವಾಗಿದ್ದರು.ಅವರು ನನ್ನ ಜೊತೆ ಯಾವಾಗಲೂ ಇರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ನನ್ನ ಅಜ್ಜಿ ನನಗೆ ತುಂಬಾ ಪ್ರೇರೇಪಣೆ ನೀಡುತ್ತಿದ್ದರು. ಇವತ್ತು ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ.ಊರಿನಲ್ಲಿ ನನಗೆ ಸಿಕ್ಕಿರುವ ಸ್ವಾಗತಕ್ಕೆ ನನಗೆ ಸಂತೋಷವಾಗಿದೆ. ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ. ಕಟೀಲು ದೇವಿಯ ದರ್ಶನ ಮಾಡಿ ಬಂದಿದ್ದೇನೆ. ಮನೆಗೆ ಹೋಗಿ ಅಜ್ಜಿಯ ಜೊತೆ ಕುಳಿತು ಮಾತನಾಡಬೇಕು. ಈಗಾಗಲೇ ನಾನು ಎರಡು ಮೂರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅನೇಕ ಸಾಮಾಜಿಕ ಕಾರ್ಯ ಮಾಡುವ ಉತ್ಸಾಹವಿದೆ. ಮಿಸ್ ಇಂಡಿಯಾ ಪುಟದಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ ಅಂತ ಹೇಳಿದ್ದಾರೆ. ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸಿನಿ ಶೆಟ್ಟಿ ಅವರಿಗೆ ಬಂಟರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು..