-->

ಒಳಉಡುಪು ( BRA)  ಬಿಚ್ಚಿಟ್ಟು ನೀಟ್  ಪರೀಕ್ಷೆ ಬರೆದ ವಿದ್ಯಾರ್ಥಿನಿಯರು !

ಒಳಉಡುಪು ( BRA) ಬಿಚ್ಚಿಟ್ಟು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು !

ತಿರುವನಂತಪುರಂ : ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ( NEET ) ಗೆ ಹಾಜರಾದ ನೂರಾರು ವಿದ್ಯಾರ್ಥಿನಿಯರಿಗೆ ಒಳ ಉಡುಪು (ಬ್ರಾ) ತೆಗೆದು ಪರೀಕ್ಷೆ ಬರೆಯಲು ಸೂಚಿಸಿದ‌ ಘಟನೆ ಕೇರಳದ ಕೊಲ್ಲಂ‌ ಜಿಲ್ಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿಯರಲ್ಲಿ ಬ್ರಾ ತೆಗೆಯುವಂತೆ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ತೀವ್ರ ಮುಜುಗರಕ್ಕೀಡಾಗಿದ್ದಾರೆ . ಕೊಲ್ಲಂ  ಜಿಲ್ಲೆಯಲ್ಲಿರುವ ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಷನ್ ಟೆಕ್ನಾಲಜಿ ಸಂಸ್ಥೆಯಲ್ಲಿ  ಆದಿತ್ಯವಾರ ನೀಟ್ ಪರೀಕ್ಷೆ ಬರೆಯುವ ವೇಳೆ ಈ ಘಟನೆ
 ನಡೆದಿದೆ . 

ಮೆಟಲ್ ವಸ್ತುಗಳನ್ನು ಪರೀಕ್ಷಾ ಕೇಂದ್ರದಲ್ಲಿ ಕೊಂಡೊಯ್ಯುವಂತಿಲ್ಲ ಎಂಬ ನಿಯಮವಿದ್ದು, ಅದರಂತೆ , ವಿದ್ಯಾರ್ಥಿಗಳನ್ನು ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಲಾಗಿತ್ತು . ಈ  ವೇಳೆ ಅಧಿಕಾರಿಗಳಿಗೆ ಅನುಮಾನ ಬಂದಿದ್ದು ಆಗ ಅವರು ಒಳಉಡುಪುಗಳನ್ನು ಬಿಚ್ಚಿಟ್ಟೇ ಹೋಗಬೇಕು ಎಂದು ಆದೇಶಿಸಿದ್ದಾರೆ. ಈ  ಕಾರಣ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಒಳಉಡುಪುಗಳನ್ನು ಬಿಚ್ಚಿಟ್ಟು ಪರೀಕ್ಷೆ ಬರೆಯಬೇಕಾಯಿತು.

 BRA ಸೇರಿ ಹಲವು ಒಳಉಡುಪಗಳು ಹುಕ್‌ಗಳನ್ನು ಹೊಂದಿದ್ದು , ಇದು ಮೆಟಲ್ ಡಿಟೆಕ್ಟರ್‌ನಲ್ಲಿ ಪತ್ತೆಯಾಗಿದೆ . ಇದರಿಂದ  ಮಕ್ಕಳು ಮುಜುಗರ ಅನುಭವಿಸಬೇಕಾಯಿತು  ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99