
UDUPI : ಕಾರು ಸುಟ್ಟು ಕೊಲೆ ಪ್ರಕರಣ : ಬಂಧಿತರಿಗೆ ನ್ಯಾಯಾಂಗ ಬಂಧನ
ಉಡುಪಿಯ ಬೈಂದೂರಿನ ನಿರ್ಜನ ಪ್ರದೇಶದಲ್ಲಿ ಕಾರ್ಕಳದ ಆನಂದ ದೇವಾಡಿಗ (60) ಅವರನ್ನು ಕಾರಿನೊಳಗೆ ಕೂಡಿ ಹಾಕಿ, ಜೀವಂತವಾಗಿ ಸುಟ್ಟು ಹಾಕಿದ ಪ್ರಕರಣದಲ್ಲಿ ಬಂಧಿತರಾದ ನಾಲ್ವರು ಆರೋಪಿಗಳಿಗೆ ಆ. 1ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆ ಆರೋಪಿಗಳಾದ ಸದಾನಂದ ಶೇರೆಗಾರ್ (52), ಶಿಲ್ಪಾ ಪೂಜಾರಿ (30), ಕೃತ್ಯಕ್ಕೆ ಸಹಕರಿಸಿದ ಸತೀಶ್ ದೇವಾಡಿಗ (49) ಮತ್ತು ನಿತಿನ್ ದೇವಾಡಿಗ (35)ನನ್ನು ಕುಂದಾಪುರದ ನ್ಯಾಯಾಲಯಕ್ಕೆ ಬೈಂದೂರು ಪೊಲೀಸರು ಹಾಜರು ಪಡಿಸಿದರು.ಕುಂದಾಪುರದ ಪ್ರಧಾನ ಸಿವಿಲ್ ನ್ಯಾಯಾಲಯದ ಆರೋಪಿಗಳಿಗೆ 14 ದಿನಗಳ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಕೊಲೆ ಪ್ರಕರಣದ ಆರೋಪಿಗಳ ಪೈಕಿ ಸದಾನಂದ, ಸತೀಶ್ ಹಾಗೂ ನಿತಿನ್‌ನನ್ನು ಉಡುಪಿಯ ಹಿರಿಯಡಕ ಸಬ್‌ಜೈಲಿಗೆ ಕರೆದೊಯ್ಯಲಾಯಿತು. ಮತ್ತೋರ್ವ ಆರೋಪಿ ಶಿಲ್ಪಾಳನ್ನು ಶಿವಮೊಗ್ಗ ಜೈಲಿಗೆ ಕರೆದೊಯ್ಯಲಾಯಿತು..