UDUPI : ಮರವಂತೆ ಸಮುದ್ರದಲ್ಲಿ ನಾಪತ್ತೆಯಾಗಿದ್ದ ರೋಶನ್ ಮೃತ ದೇಹ ಪತ್ತೆ
Monday, July 4, 2022
ಉಡುಪಿಯ ಜಿಲ್ಲೆಯ ಮರವಂತೆ ಸಮುದ್ರಕ್ಕೆ ಕಾರು ಬಿದ್ದು ನಾಪತ್ತೆಯಾಗಿದ್ದ ರೋಶನ್ ಮೃತ ದೇಹ ತ್ರಾಸಿ ಹೊಸ ಕೋಟೆಯ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಶನಿವಾರ ತಡರಾತ್ರಿ ೧ ಗಂಟೆ ಸುಮಾರಿಗೆ ಕುಂದಾಪುರ ಕಡೆಯಿಂದ ಬೈಂದೂರಿನತ್ತ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರಪಾಲಾದ ಪರಿಣಾಮ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ವೀರಾಜ್ ಆಚಾರ್ಯ ಸಾವನ್ನಪ್ಪಿದ್ದು, ರೋಶನ್ ನಾಪತ್ತೆಯಾಗಿದ್ದರು. ಇಬ್ಬರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದ ದಾರುಣ ಘಟನೆ ನಡೆದಿತ್ತು.
ಇಂದು ರೋಶನ್ ಮೃತದೇಹ ಪತ್ತೆಯಾಗಿದೆ. ಕೊಸ್ಟ್ ಗಾರ್ಡ್ ಹಾಗೂ ಅಗ್ನಿಶಾಮಕ ದಳದವರು ಭಾನುವಾರದಿಂದ ಹುಡುಕಾಟ ನಡೆಸಿದ್ದರು.