UDUPI : ಕೃಷಿ ಕೆಲಸ ಮಾಡುತ್ತಿರುವ ವೇಳೆ ಜಾರಿ ಬಿದ್ದು ಕೃಷಿಕ ಸಾವು
Monday, July 4, 2022
ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿರುವ ವೇಳೆ ಜಾರಿ ಬಿದ್ದು
ಪ್ರಗತಿಪರ ಕೃಷಿಕರೊಬ್ಬರು ಸಾವನ್ನಪ್ಪಿದ ದುರ್ಘಟನೆ ಉಡುಪಿ ಜಿಲ್ಲೆಯ ಬೈರಂಪಳ್ಳಿಯಲ್ಲಿ ನಡೆದಿದೆ.
ಬೈರಂಪಳ್ಳಿ ದೂಪದಕಟ್ಟೆ ನಿವಾಸಿ ಉಮೇಶ್ ಕುಲಾಲ್(35) ಸಾವನ್ಪಿದ ಕೃಷಿಕ. ಉಮೇಶ್ ಕುಲಾಲ್, ತನ್ನ ಮನೆಯ ಹೊಲದಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.