ತೃತೀಯ ಲಿಂಗಿಗಳು ಮಾಡಿದ ಆ ಮಹತ್ ಕಾರ್ಯ: ಅತ್ಯಾಚಾರದಿಂದ ಪಾರಾದ ಯುವತಿ
ಬೆಂಗಳೂರು: ಒಂಟಿ ಯುವತಿಯಿದ್ದ ಮನೆಗೆ ಬೆಳಗ್ಗಿನ ಜಾವ ಕಾಮುಕನೊಬ್ಬ ನುಗ್ಗಿ ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದು, ಆದರೆ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಇಬ್ಬರು ತೃತೀಯ ಲಿಂಗಗಳು ಯುವತಿಯನ್ನು ಅತ್ಯಾಚಾರದಿಂದ ಪಾರು ಮಾಡಿದ್ದಾರೆ.
ಘಟನೆ ಜು. 2ರಂದು ಬೆಳಗ್ಗಿನ ಜಾವ 4 ಗಂಟೆಗೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಂತೆ ವಿವೇಕ್ ನಗರ ಪೊಲೀಸ್ ಠಾಣೆ ಪೊಲೀಸರು ಮಸುರಲ್ ಶೇಕ್ ಎಂಬಾತನನ್ನು ಬಂಧಿಸಿದ್ದಾರೆ.
ಸಂತ್ರಸ್ತೆಯು ಮಿಜೊರಾಂ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭಾಸ ಮಾಡುತ್ತಿದ್ದಾರೆ. ಈಕೆ ಈಜಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಜು.2ರ ಬೆಳಗಿನ ಜಾವ ಅಲ್ಲಿಗೆ ಬಂದ ಆರೋಪಿ ಕಾಲಿಂಗ್ ಬೆಲ್ ಹೊಡೆದಿದ್ದಾನೆ. ಬಾಗಿಲು ತೆರೆಯಲು ನಿದ್ರೆ ಮಂಪರಿನಲ್ಲಿ ಎದ್ದು ಬಂದ ಯುವತಿ, ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಒಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಯುವತಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ಇಬ್ಬರು ತೃತೀಯ ಲಿಂಗಿಗಳು ವಿದ್ಯಾರ್ಥಿನಿಯನ್ನು ಕಾಪಾಡಿದ್ದಾರೆ.