UDUPI : ತಾಯಿಯನ್ನು ನಿಂದಿಸಿದಕ್ಕೆ ಹೊಡೆದು ಕೊಂದರಾ..?
Thursday, July 21, 2022
ತಾಯಿಯನ್ನು ನಿಂದಿಸಿದ ಎನ್ನಲಾದ ಕಾರಣಕ್ಕೆ ಕುಡಿದ ಅಮಲಿನಲ್ಲಿದ್ದ ಇಬ್ಬರು ಸೇರಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಉಡುಪಿಯ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ನಡುವಿನ ಇಂದ್ರಾಳಿ ರೈಲ್ವೆ ಜಂಕ್ಷನ್ ಸಮೀಪ ನಡೆದಿದೆ.ತಮಿಳುನಾಡು ಮೂಲದ ಕುಮಾರ್ (32) ಕೊಲೆಯಾದ ವ್ಯಕ್ತಿ.
ಕುಟ್ಟಿ ಮತ್ತು ನವೀನ್ ಎಂಬುವರು ಇಂದ್ರಾಳಿಯ ಬಾರೊಂದರಲ್ಲಿ ಕುಡಿದು ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಕುಮಾರ್, ಕುಡಿದ ಅಮಲಿನಲ್ಲಿ ನವೀನ್ ಮತ್ತು ಕುಟ್ಟಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎನ್ನಲಾಗಿದ ಮೂವರ ನಡುವೆ ಮಾತಿಗೆ ಮಾತು ಬೆಳೆದು,
ಈ ವೇಳೆ ಸಿಟ್ಟಿನಿಂದ ನವೀನ್ ಮತ್ತು ಕುಟ್ಟಿ ಸೇರಿ ಮರದ ದೊಣ್ಣೆಯಿಂದ ಕುಮಾರನ ತಲೆಗೆ ಹೊಡೆದಾಗ ಆತ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಅಂತ ಹೇಳಲಾಗಿದೆ.. ಪೊಲೀಸರು ಸ್ಥಳಕ್ಕೆ ಬೇಟೆ ನೀಡಿ ಪ್ರಕರಣ ದಾಖಲಿಸಿದ್ದಾರೆ..