
UDUPI : ಈ ಟೈಮ್ಡ್ ಉಲ್ಲನಾ ? ಬಸ್ ಸಿಬ್ಬಂದಿ ನಡುವೆ ಹೀಗೊಂದು ಬೀದಿ ರಂಪಾಟ
ಕರಾವಳಿಯಲ್ಲಿ ಸಂಚರಿಸುವ ಖಾಸಗಿ ಬಸ್ಸಿನ ನಿರ್ವಾಹಕರ ನಡುವೆ ಟೈಮಿಂಗ್ ವಿಚಾರದಲ್ಲಿ ಗಲಾಟೆ ನಡೆಯೋದು ಸಾಮಾನ್ಯ. ಕೆಲವೊಮ್ಮೆ ಗಲಾಟೆ ತಾರಕಕ್ಕೆ ಏರಿ ಹೊಡಿ ಬಡಿ ಹಂತಕ್ಕೂ ತಲುಪುತ್ತೆ. ಅದರಂತೆ ಉಡುಪಿಯಿಂದ ಕಟೀಲು ಕಡೆಗೆ ಸಾಗುತ್ತಿದ್ದ ಎರಡು ಬಸ್ಸಿನ ಸಿಬ್ಬಂದಿ ನಡುವೆ ಮಾರ್ಗ ಮಧ್ಯೆದಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಗಲಾಟೆ ವಿಡಿಯೋ ವೈರಲ್ ಆಗಿದೆ.
ನವದುರ್ಗಾ, ಹೆಸರಿನ ಖಾಸಗಿ ಬಸ್ ಕಟೀಲು ಕಡೆ ಹೋಗುತ್ತಿದ್ದಾಗ, ಇದನ್ನು ಹಿಂಬಾಲಿಸಿ ಬಂದ ಆಶಾ ಬಸ್ ಅಡ್ಡಗಟ್ಟಿದೆ. ನಂತರ ಟೈಮಿಂಗ್ ವಿಚಾರದಲ್ಲಿ ಎರಡು ಬಸ್ಸಿನ ನಿರ್ವಾಹಕರು ಹಾಗೂ ಚಾಲಕರ ನಡುವೆ ಗಲಾಟೆ ನಡೆದಿದೆ. ಬಳಿಕ ನಂತರ ನವದುರ್ಗಾ ಬಸ್ ಆಶಾ ಬಸ್ಸಿಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಕೋಪಗೊಂಡ ಆಶಾ ಬಸ್ ಸಿಬ್ಬಂದಿ ನವದುರ್ಗಾ ಬಸ್ ಒಳಗೆ ಹೋಗಿ ಗಲಾಟೆ ನಡೆಸಿದ್ದಾರೆ. ಈ ಗಲಾಟೆ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.